ಕಿಸಾನ್ ಕಾಂಗ್ರೆಸ್ ಬಳ್ಳಾರಿ ವತಿಯಿಂದ ಬಾರತ್ ಬಂದ್ ಗೆ ಸಹಕಾರ

0
102

ಬಳ್ಳಾರಿ:ಸೆ:25:- ರೈತನಿಗೆ ಕನಿಷ್ಟ ಬೆಂಬಲ ನೀಡದಿದ್ದರೆ, ಇಡಿ ದೇಶವೇ ಸುಟ್ಟು ಕರಕಲು ಆಗುವುದು ಸತ್ಯ.
ಇಡೀ ಪ್ರಪಂಚವೇ ಆಧಾರವಾಗಿರುವುದು ರೈತನ ಮೇಲೆ, “ರೈತನ ಬೆವರಿನ ಹನಿ, ಎಲ್ಲಾರ ಜೀವನದ ಧ್ವನಿಯಾಗಿದೆ.” ಇದನ್ನು ಮರೆತು ಬಾಳುವುದು ಸರಿಯೇ…? ಯೋಚಿಸಿ….! ಎಲ್ಲರಿಗೂ ಜೀವನವನ್ನು ಕೊಟ್ಟ ರೈತನ ಬದುಕು ಮಾತ್ರ ಅಲ್ಲೇ ಇದೆ. ಆದರೂ ಯಾವ ರೈತನು ಯಾರ ಮೇಲೂ ದೂರು ನೀಡದೆ ನೇಗಿಲನ್ನು ಹಿಡಿದು ಯೋಗಿಯಂತೆ ಭೂ ತಾಯಿ ಜೊತೆ ಮಾತನಾಡುವನು.ಇಂತಹ ಮಹಾನ್ ತ್ಯಾಗಿಯನ್ನು ಮರೆತು ಬಾಳುವುದು ಸರಿಯಲ್ಲ. ಸಮಾಜವೇ ಇರಲಿ ಸರ್ಕಾರವೇ ಇರಲಿ. ಅವನ ಬಗ್ಗೆ ಚಿಂತಿಸಿ ವಂದಿಸುವ ಕಾರ್ಯ ನಡೆದಾಗ ಇಡೀ ರಾಷ್ಟ್ರವೇ ಸುಭಿಕ್ಷಿತೆಯಲ್ಲಿ ಇರಲು ಸಾಧ್ಯ ಎಂಬುವುದು ನನ್ನ ದೃಢ ನಿರ್ಧಾರ.

ಪ್ರತಿ ಚಟುವಟಿಕೆಗಳು ಪ್ರಾರಂಭವಾಗುವುದು ರೈತನಿಂದಲೇ..ಅರ್ಥಿಕವಾಗಿ ಸಬಲರಾಗಲು, ಶಿಕ್ಷಣ ಹೊಂದಲು, ಔದ್ಯೋಗಿಕ ಕ್ಷೇತ್ರ ಬೆಳವಣಿಗೆ ಹೊಂದಲು, ಅಂತರರಾಷ್ಟ್ರೀಯ ಸಂಬಂಧಗಳು ಬಲಗೊಳ್ಳಲು, ಪ್ರತಿಯೊಬ್ಬರು ಆರೋಗ್ಯದಿಂದ ಸದೃಢರಾಗಲು, ಸಂಶೋಧನೆ ಮಾಡಲು, ಹೀಗೆ ಹೇಳುತ್ತಾ ಹೋದರೆ ಸಮಯವೇ ಸಾಲುವುದಿಲ್ಲ..

ರೈತನ ಮೇಲೆಯೇ ಧರ್ಮವು ಕರ್ಮವು ನಿಂತಿದೆ. ಅವನ ಕಾಯಕದ ಫಲದಿಂದಲೇ ನಮ್ಮ ಜೀವನ ಸಫಲವಾಗಲು ಸಾಧ್ಯ. ಒಬ್ಬ ಕೂಲಿ ಕಾರ್ಮಿನಿಂದ ಹಿಡಿದು ಶ್ರೀಮಂತನು ಆಧಾರವಾಗಿರುವು ಒಬ್ಬ ರೈತನ್ನೆನ್ನುವ ದೇವರ ಮೇಲೆಯೇ..! ಹೊರತು ಮತ್ಯಾರ ಮೇಲೆಯೂ ಅಲ್ಲ. ಇಂತಹ ದೇವರಿಗೆ ಸಿಗಬೇಕಾದ ಕನಿಷ್ಟ ಮಾನ್ಯತೆ ಸಿಗುತ್ತಿಲ್ಲ ಎಂದರೆ ಇನ್ನೂ ನಾವು ನೀವುಗಳೆಲ್ಲಾ ಅಪರಾಧಿಗಳೆಂದೇ ಅರ್ಥ.
ದಯವಿಟ್ಟು ರೈತರಿಗೆ ಬೆಂಬಲ ನೀಡಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಹೊಣೆ ಇದನ್ನುಯಾರೋ ಸಹ ಮರೆಯದೆ ಪಾಲಿಸಬೇಕು..

ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಬಿಳು ಬಿಟ್ಟು ಗಾಳಿ ಮಳೆ ಬಿಸಿಲು ಎನ್ನದೆ ತಮ್ಮ ಕುಟುಂಬವನ್ನು ಪಣಕ್ಕಿಟ್ಟು ಪ್ರತಿಭಟನೆ ನಡೆಸುತ್ತಿದ್ದರು ಕ್ಯಾರೆ ಎನ್ನದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಮ್ಮ-ನಿಮ್ಮೆಲ್ಲರ ಸಹಕಾರ ಅತ್ಯವಸರವಾಗಿದೆ.

ರೈತರು ಹಿಂದುಳಿಯಲು ಬರೀ ಸರ್ಕಾರವೇ ಒಂದೇ ಕಾರಣವಲ್ಲ, ಜನ ಸಾಮಾನ್ಯರು ಸಹ ಇದಕ್ಕೆ ನೇರ ಹೊಣೆ…ಆದರೆ ಸರ್ಕಾರವು ಅತಿ ಹೆಚ್ಚಿನ ಗಮನ ರೈತರಿಗೆ ನೀಡಬೇಕಾಗಿರುವುದು ಆದ್ಯ ಕರ್ತ್ಯವ್ಯವಾಗಿದೆ.ನಿಗದಿತ ಸಮಯಕ್ಕೆ ರೈತರಿಗೆ ಬೇಕಾದ ಸಹಾಯ ಸಹಕಾರಗಳನ್ನು ನೀಡಬೇಕು ಸರ್ಕಾರಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ಈ ಬಂದ್ ಅನ್ನು ಸರ್ವರ ಸಮ್ಮತಿಯಿಂದ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದ್ದೇವೆ ಅದ್ದರಿಂದ ಎಲ್ಲಾರ ಸಹಕಾರ ಅತಿ ಮುಖ್ಯವಾಗಿದೆ. ಸರ್ಕಾರ ರೈತರಿಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ನೀಡಬೇಕಾದ ಸಹಾಯ ಸಹಕಾರಗಳನ್ನು ನೀಡದೆ ರೈತರಿಗೆ ವಿರೋಧವಾಗಿ ಅನೇಕ ಕಾನೂನು ಕಾಯ್ದೆಗಳನ್ನು ರೂಪಿಸಿ ವಂಚಿಸುತ್ತಿದೆ. ರಾಸಾಯನಿಕ ಕಂಪನಿಗಳ ಬೆಳವಣಿಗೆಗೆ ನೇರವಾಗಿ ಕಾರಣವಾಗುತ್ತಿರುವುದು ವಿಷಾದನೀಯ ಸಂಗತಿ ಆದ್ದರಿಂದ ಸಾರ್ವಜನಿಕ ಬಂಧುಗಳು ಬಟ್ಟೆ ಅಗಂಡಿ ಮಾಲೀಕರು.ಲಾರಿ ಮಾಲೀಕರು. ಮದ್ಯ ಮಾರಾಟ ಮಾಲೀಕರು.ಜಿಲ್ಲೆಯ ಅನೇಕ ರೀತಿಯ ಮಾಲೀಕರು ಮತ್ತು ಅನೇಕ ರೀತಿಯ ಸಂಘ ಸಂಸ್ಥೆಗಳು ರೈತರ ಪರವಾಗಿ ನಿಂತು ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಮಾಡಲು ಪ್ರತಿಭಟನೆಯಲ್ಲಿ ಪಾಲ್ಗೊಂಡು ಈ ಭರತ್ ಬಂದ್ ಗೆ ತಮ್ಮ ಅಮೂಲ್ಯ ಸಹಕಾರ ಪ್ರೋತ್ಸಾಹ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ಈ ಸಂಧರ್ಭದಲ್ಲಿ ಮನ್ಯಂ ಶ್ರೀಧರ್,
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಳ್ಳಾರಿ.
ಯೋಗೇಶ್ ಕುಮಾರ್ ಭಂಡಾರಿ,
ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಳ್ಳಾರಿ. ರೇಖಾ ವಿ ಕಂಪ್ಲಿ ಸ್ವಚ್ಚ ಮನಸಿನವಳು.

ವರದಿ:-ಮಹೇಶ್

LEAVE A REPLY

Please enter your comment!
Please enter your name here