ಗೃಹರಕ್ಷಕ ಸಿಬ್ಬಂದಿಗಳಿಗೆ ಸಹಕಾರ : ಎಸ್ಪಿ ಪಿ.ಕೃಷ್ಣಕಾಂತ, ಹೊಮ್ ಗಾಡ್ರ್ಸ್ ಕಾರ್ಯ ಶ್ಲಾಘನೀಯ

0
124

ಧಾರವಾಡ : ಡಿ.09: ಪೊಲೀಸ್ ಇಲಾಖೆಯೊಂದಿಗೆ ಹೊಮ್ ಗಾಡ್ರ್ಸ್‍ಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾರೆ ಇವರ ಸೇವೆ ಸ್ಮರಣೀಯವಾಗಿದೆ, ಅವರಿಗೆ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಪಿ.ಕೃಷ್ಣಕಾಂತ ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಏರ್ಪಡಿಸಿದ್ದ 59ನೇ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೃಹರಕ್ಷಕದಳದ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕ ಹಾಗೂ ನಿμÉ್ಠಯಿಂದ ಮಾಡುತ್ತಾರೆ. ಪೆÇಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಇಲಾಖೆಗೆ ಗೃಹರಕ್ಷಕದಳದ ಸಿಬ್ಬಂದಿಯ ಹಾಜರಾತಿಯಿಂದ ಧೈರ್ಯ ಬರುತ್ತದೆ.ಗೃಹರಕ್ಷಕ ಸಿಬ್ಬಂದಿ ಸಮವಸ್ತ್ರ ಹಾಕಿಕೊಂಡು ಸಮಾಜದ ರಕ್ಷಣೆಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದರು.
ಕಳೆದ ವರ್ಷ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯಗೈದ ನಿಮ್ಮ ಸೇವೆ ಶ್ಲಾಘನೀಯವಾಗಿದೆ. ವೈಯಕ್ತಿಕವಾಗಿ ಸಮಸ್ಯೆಗಳಿದ್ದರೆ ನೇರವಾಗಿ ಬಂದು ಭೇಟಿಯಾಗಬಹುದು. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆಂದು ಗೃಹರಕ್ಷಕ ಸಿಬ್ಬಂದಿಗಳಿಗೆ ಅಭಯ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‍ಪಿ ಹಾಗೂ ಗೃಹರಕ್ಷಕದಳದ ಪ್ರಭಾರ ಸಮಾದೇಷ್ಟ ಶಿವಾನಂದ ಚನ್ನಬಸಪ್ಪನವರ ಮಾತನಾಡಿ,59 ವರ್ಷಗಳ ಇತಿಹಾಸ ಹಿಂದಿರುಗಿ ನೋಡಿದರೆ ಬಡ ರಾಷ್ಟವಾಗಿದ್ದ ನಮ್ಮ ದೇಶ ಅಭಿವೃದ್ಧಿ ಹೊಂದಲು
ಅನೇಕರು ಅನೇಕ ರೀತಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ಅದರಲ್ಲಿ ಗೃಹರಕ್ಷಕರ ಕೊಡುಗೆಯೂ ಕೂಡಾ ಅತ್ಯಂತ ಪ್ರಮುಖ ಅಂಶವಾಗಿದೆ.ಬರುವ ದಿನಗಳಲ್ಲಿ ಗೃಹರಕ್ಷಕರು ಸರ್ಕಾರದ ಭಾಗವಾಗುವ ಸಾಧ್ಯತೆಗಳಿವೆ
ಎಂದು ಹೇಳಿದರು.
ಜಿಲ್ಲಾ ಗೃಹರಕ್ಷಕದಳ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಟಾಫ್ ಆಫೀಸರ್ ಡಾ.ಎಮ್.ಎ ಮುಮ್ಮಿಗಟ್ಟಿ ವರದಿ ವಾಚನ ಮಾಡಿದರು.
ಜಿಲ್ಲಾ ಗೃಹರಕ್ಷಕದಳದ ಮಾಜಿ ಕಮಾಂಡೆಂಟ್ ಸತೀಶ್ ಕುಮಾರ ಪಾಟೀಲ,ಗೃಹರಕ್ಷಕದಳದ ಸಹಾಯಕ ಬೋಧಕರಾದ ಟಿ.ಎ.ಬಾದಾಮಿ,ಆರ್ ಎಚ್ ಶಾಂತಗೇರಿ, ಜಿಲ್ಲಾ ಗೃಹರಕ್ಷಕದಳದ ಘಟಕಾಧಿಕಾರಿಗಳಾದ ಅಶೋಕ ಬಿ.ಗೌಡರ್,ಪ್ಲಟೂನ್ ಕಮಾಂಡರ್ ವಾದಿರಾಜ ದೇಶಪಾಂಡೆ, ಸ್ಟಾಫ್ ಆಫೀಸರ್ ಹಾಗೂ ಜಿಲ್ಲೆಯ ಪೌರರಕ್ಷಣಾ ಚೀಫ್ ವಾರ್ಡನ್ ಸತೀಶ ಇರಕಲ್, ಜಿಲ್ಲಾ ಗೃಹರಕ್ಷಕದಳದ ಸಹಾಯಕ ಆಡಳಿತಾಧಿಕಾರಿ ಸತೀಶ್ ನಾಯಕ, ಸೆಕ್ಷನ್ ಲೀಡರ್ ಪ್ರಶಾಂತ ಲೋಕಾಪುರ,ಗೃಹರಕ್ಷಕ ಮತ್ತು ಗೃಹರಕ್ಷಕಕಿ ಸಿಬ್ಬಂದಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಪದಕ ಪಡೆದ 6 ಗೃಹರಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ
ನೆನಪಿನ ಕಾಣಿಗೆ ನೀಡಿ ಸನ್ಮಾನಿಸಲಾಯಿತು. ಡಾ.ಪ್ರಕಾಶ ಪವಾಡಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here