ಡಿವೈಎಫ್ಐ 5ನೇ ತಾಲೂಕು ಸಮ್ಮೇಳನದ ಲಾಂಛನ ಬಿಡುಗಡೆ

0
133

ಸಂಡೂರು/ತೋರಣಗಲ್ಲು:ಡಿ:19: ಸಂಡೂರು ತಾಲೂಕಿನ ತೋರಣಗಲ್ಲಿನ ಸೂರಿ ಭವನದಲ್ಲಿ ಡಿವೈಎಫ್ಐನ 5ನೇ ತಾಲ್ಲೂಕು ಸಮ್ಮೇಳನದ ಅಂಗವಾಗಿ ಸಮ್ಮೇಳನದ ಲಾಂಛನ ಬಿಡುಗಡೆಯನ್ನು ಮಾಡಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ಸೈಯದ್ ಶರೀಫ್ ರವರು ಲಾಂಛನ ಬಿಡುಗಡೆ ಕುರಿತು ಮಾತನಾಡಿದ ಅವರು ಸದ್ಯ ದೇಶದ ಪರಿಸ್ಥಿತಿ ಒಂದು ಕಡೆ ಹಸಿವು ಬಡತನವಾದರೆ ಇನ್ನೊಂದು ಕಡೆ ನಿರುದ್ಯೋಗದ ಭೀಕರತೆ ಹೆಚ್ಚಾಗುತ್ತಿದೆ ಗಣಿಗಳ ಜಿಲ್ಲೆಯಾದಂತಹ ಬಳ್ಳಾರಿಯು ಸ್ಥಳೀಯವಾಗಿ ಅತಿ ಹೆಚ್ಚಿನ ಕಾರ್ಖಾನೆಗಳನ್ನು ಹೊಂದಿದೆ ಜಿಲ್ಲಾ ಜಿಂದಾಲ್ ನಂತಹ ಬೃಹದಾಕಾರದ ಕಾರ್ಖಾನೆ ಪಕ್ಕದಲ್ಲೇ ಇದ್ದರೂ ಯುವಜನತೆ ನಿರುದ್ಯೋಗದಿಂದ ಪರದಾಡುವಂತಾಗಿದೆ ದೇಶದಲ್ಲಿ ಶೇಕಡಾ 52ರಷ್ಟು ಇರುವ ಯುವಜನತೆಯನ್ನು ಧರ್ಮದ ಆಧಾರದಲ್ಲಿ ಒಡೆದು ತಮ್ಮ ರಾಜಕೀಯ ಬೇಳೆಯನ್ನು ಬೆಯಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್ಲಾ ಅಶ್ಪಾಕುಲ್ಲಾ ಖಾನ್ ಹುತ್ಮಾರಾದ ಈ ದಿನದಂದು ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಚನ್ನಬಸಯ್ಯ , ಈ.ತಿರುಪತೆಪ್ಪ , ವೆಬಾ ಕುಮಾರಿ, ಶಿವರೆಡ್ಡಿ, ಎ.ಸ್ವಾಮಿ, ಎಸ್‌. ಕಾಲೂಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌ ಹಾಗೂ ಕೆ.ರಮೇಶ್ ನಿರೂಪಿಸಿದರು ಹೆಚ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವರೆಡ್ಡಿ ವಂದಿಸಿದರು. ಖಲಾಂದರ್ ಭಾಷಾ , ಎನ್ ವೀರೇಶ್, ಮಹಮ್ಮದ್ , ಬುಡೇನ್, ದಾದು, ಸರಸ್ವತಿ, ಲಕ್ಷ್ಮಿ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here