ಜೆ ಮ್ಯಾಸರಹಟ್ಟಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ಶುದ್ಧ ಕುಡಿಯುವ ನೀರು ಸ್ಥಳೀಯರಿಗೆ ಮರೀಚಿಕೆ.!

0
157

ವಿಜಯನಗರ.07: ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ ಮ್ಯಾಸರಹಟ್ಟಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಕೆಟ್ಟುನಿಂತ ಸುಮಾರು 7,8 ತಿಂಗಳಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಿರುಗಿ ನೋಡಿದಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ಅಶುದ್ಧ ಹಾಗೂ ಪ್ಲೋರೈಡ್‌ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿ ಈ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಒದಗಿಸುವ ಸರಕಾರದ ಯೋಜನೆ ಸಾಕಷ್ಟು ಅನುಕೂಲ ಕಲ್ಪಿಸಿದೆ, ಆದರೆ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಪರಿಣಾಮ ಬಹುತೇಕ ಕಡೆಗಳಲ್ಲಿ ಹೆಸರಿಗೆ ಮಾತ್ರ ಇದ್ದು ಜನರಿಗೆ ಉಪಯೋಗವಿಲ್ಲದಂತಾಗಿದೆ. ಜನರಿಗೆ ಶುದ್ಧ ನೀರು ಮತ್ತೇ ಮರಿಚಿಕೆಯಾಗಿದ್ದು,ಘಟಕಗಳು ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಾ ಹಾಗೂ ಹೀಗೂ ಕೆಲವು ತಿಂಗಳ ಕಾಲ ಕಾರ್ಯನಿರ್ವಹಿಸಿದ ಈ ಘಟಕಗಳು ಮತ್ತೆ ನಿಂತು ಹೋಗಿವೆ.

ಒಟ್ಟಿನಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ಎನ್ನುವಂತಾಗಿದ್ದು, ಜನರಿಗೆ
ಇದರ ಉಪಯೋಗವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಊರಿನ ಗ್ರಾಮಸ್ಥರಾದ ಪೂಜಾರಿ ಸುರಯ್ಯ, ಬೋರಣ್ಣ, ಬಡಗಿ ಸಣ್ಣ ಬೋರಯ್ಯ, ಗೋಪಾಲಿ, ರಾಜಣ್ಣ, ಜಿ ಬೋಸಯ್ಯ, ರಾಮಣ್ಣ, ನಾಗೇಶ್, ಊರಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ:-ಮಂಜುನಾಥ್

LEAVE A REPLY

Please enter your comment!
Please enter your name here