ಕೆಲಸಕ್ಕೆ ಮಾತ್ರ ನಾವು ಬೇಕು ಸೌಲಭ್ಯಕ್ಕೆ ನಾವು ಬೇಕಾಗಿಲ್ಲ ; ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ನಾಗರತ್ನಮ್ಮ

0
280

ಸಂಡೂರು:ಅ:10: ಎಲ್ಲಾ ಕೆಲಸಕ್ಕೂ ಅಂಗನವಾಡಿ ಕಾರ್ಯಕರ್ತೆಯರು ಬೇಕು, ಅದರೆ ಸೌಲಭ್ಯಗಳಿಗೆ ಮಾತ್ರ ಬೇಕಾಗಿಲ್ಲ ಎನ್ನುವಂತಹ ದುಸ್ಥಿತಿ ಅಂಗನವಾಡಿ ಕಾರ್ಯಕರ್ತೆಯರದಾಗಿದೆ, ಅದ್ದರಿಂದ ಬದುಕು ದುಸ್ಥರವಾಗಿದೆ, ಅದ್ದರಿಂದ ಕನಿಷ್ಠವೇತನ ಸೇರಿದಂತೆ ಹಲವು ಬೇಡಿಕೆ ಈಡೇರಿಸಿ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ನಾಗರತ್ನಮ್ಮ ಒತ್ತಾಯಿಸಿದರು.

ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟಿಸಿ ತಹಶೀಲ್ದಾರ್ ಹೆಚ್.ಜೆ.ರಶ್ಮಿ ಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು ಇದರಿಂದ ನಿತ್ಯ ಬದುಕು ಸಹ ಕಷ್ಟವಾಗಿದೆ, ಅದ್ದರಿಂದ ಕನಿಷ್ಠವೇತನ,ಉಪಧನ, ಪರಿಹಾರ ಸೇರಿದಂತೆ ಕಾನೂನು ಬದ್ಧ ಸೌಲಭ್ಯಗಳನ್ನು ಒದಗಿಸಬೇಕು, ಅಂಗನವಾಡಿ ಕೇಂದ್ರ ಫಲಾನುಭವಿಗಳಿಗೆ ಮೊಟ್ಟೆ ವಿತರಿಸುತ್ತಿದ್ದ ಇದರ ಧರವೂ ಸಹ ಹೆಚ್ಚಳವಾಗಿದ್ದು ಹೆಚ್ಚಳ ಹಣವನ್ನು ಗ್ರಾಮ ಪಂಚಾಯಿತಿಯವರು ನೀಡಬೇಕು ಇನ್ನೂ ಸಹ ನೀಡಿಲ್ಲ ತಕ್ಷಣ ಇದನ್ನು ಇಲಾಖೆಯ ಮೂಲಕವೇ ವಿತರಿಸಬೇಕು, ಮುಂಗಡ ಹಣ ಪಾವತಿಸಬೇಕು, ಮೊಬೈಲ್ ಹ್ಯಾಪ್‍ನಲ್ಲಿ ಪೋಷಣಾ ಟ್ರ್ಯಾಕ್ ಒಂದನ್ನು ಮಾತ್ರ ಮಾಡುತ್ತೇವೆ, ಸ್ನೇಹ ಹ್ಯಾಪ್ ಮಾಡಲು ಕಷ್ಟಸಾಧ್ಯವಾಗಿದೆ ಅದನ್ನು ನಿಲ್ಲಿಸಿ, ಶಿಶು ಅಭಿವೃದ್ದಿ ಯೋಜನೆ ಅಡಿಯಲ್ಲಿ ಕೇಂದ್ರಗಳಿಗೆ ಆಯ್ಕೆಯಾದ ಅಭ್ಯಾರ್ಥಿಗಳ ಕಛೇರಿ ಅದೇಶವೇ ಇಲ್ಲವಾಗಿದೆ, ಅದ್ದರಿಂದ ತಕ್ಷಣ ಅದೇಶ ಪ್ರಮಾಣ ಪತ್ರ ನೀಡಬೇಕು, ಸೇವಾ ಹಿರಿತನದ ಆಧಾರದಲ್ಲಿ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ಸೌಲಭ್ಯಗಳನ್ನು ಹೆಚ್ಚಿಸಬೇಕು, ಗೌರವ ಧನ ಸರಿಯಾದ ಸಮಯಕ್ಕೆ ನೀಡಬೇಕು, ಖಾಲಿ ಇರುವ ಮೇಲ್ವಿಚಾರಕಿಯವರ ಹುದ್ದೆಗಳೀಗೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಟಿ.ಕವಿತಾ ಅವರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬೇಕಾದ ಸೌಲಭ್ಯಗಳು ಸಿಗದೇ ತಿಂಗಳಿಗೆ ಒಂದರಂತೆ ನೂತನ ಕೆಲಸಗಳು ಮಾತ್ರ ಬರುತ್ತಿವೆ, ಕೆಲಸ ಹೆಚ್ಚು ವೇತನ ಕಡಿಮೆ ಎನ್ನುವಂತಾಗಿದೆ, ಒಂದು ಕಡೆ ಬೆಲೆ ಏರಿಕೆ, ಮತ್ತೊಂದು ಕಡೆ ಕೆಲಸ ಹೆಚ್ಚಳ, ವೇತನ ಮಾತ್ರ ಕಡಿಮೆ ಅದ್ದರಿಂದ ಬೆಲೆಗೆ ತಕ್ಕಂತೆ ವೇತನ ನೀಡಿ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಿ.ಶಾರದ, ವೆಂಕಟಲಕ್ಷ್ಮೀ, ನಾಗರತ್ನ, ಗೌರಮ್ಮ, ಶಿವಲಿಂಗಮ್ಮ,.ಪಿ.ಸುನಿತ, ಚಂದ್ರಕಲಾ, ಯಲ್ಲಮ್ಮ, ಬಿ.ಮಮತಾ, ಗಂಗಮ್ಮ,ಮೀನಾಕ್ಷಿ, ಶಾರದಾ,ತಾಯಕ್ಕ,ಇತರರು ಉಪಸ್ಥಿತರಿದ್ದು ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here