ಮುತ್ತು ಪಾಟೀಲ್ ಸೇವಾಕಾರ್ಯ ಶ್ಲಾಘನೀಯ: ಅಜಯ್ ದಾಸರಿ

0
113

ಸುಮಾರು 8 ವರ್ಷಗಳಿಂದ ನಿಸ್ವಾರ್ಥ ಮನೋಭಾವದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮುತ್ತು ಪಾಟೀಲ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಯುವ ಮುಖಂಡ ಹಾಗು ಗುತ್ತೆದಾರರಾದ ಅಜಯ್ ಕುಮಾರ್ ದಾಸರಿ ಹೇಳಿದರು.
ಅವರು ನಗರದ ಶ್ರೀ ಶಕ್ತಿ ರಕ್ತ ಭಂಡಾರ ಸಂಸ್ಥೆಯಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಮುತ್ತು ಪಾಟೀಲ್ ಗೆ ಅಭಿನಂದನೆ ಹಾಗೂ 34 ಬಾರಿ ರಕ್ತದಾನ ಮಾಡಿದ ಪರಮೇಶ್ ಮಸ್ಕಿ ಅವರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅನಾಥರ, ಬಡಮಕ್ಕಳ ಹಾಗೂ ಆಸ್ಪತ್ರೆಗಳ ವಿವಿಧ ಕ್ಷೇತ್ರಗಳಲ್ಲಿ ಮುತ್ತು ಪಾಟೀಲ್ ತನ್ನ ವಯಸ್ಸಿಗೂ ಮೀರುವ ಕಾರ್ಯದಲ್ಲಿ ತೊಡಗಿ ಸೇವೆ ಮಾಡುತ್ತಿರುವುದು ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಶ್ರೀ ಶಕ್ತಿ ರಕ್ತ ಭಂಡಾರ ಸಂಸ್ಥೆ ವ್ಯವಸ್ಥಾಪಕ ಸೋಮನಗೌಡ ಬಾದರ್ಲಿ, ಇಂಜಿನಿಯರ್ ದೊಡ್ಡನಗೌಡ, ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ್, ಮಂಜು ಗೋನಾಳ,ರಾಜಭಕ್ಷಿ, ಬೂದೇಶ, ಶರಣಬಸವ ಮಸ್ಕಿ, ಮಹಾಂತೇಶ ಸೇರಿದಂತೆ ಶ್ರೀ ಶಕ್ತಿ ರಕ್ತ ಭಂಡಾರದ ಸಿಬ್ಬಂದಿಗಳು ಇದ್ದರು.

ವರದಿ: ಅವಿನಾಶ ದೇಶಪಾಂಡೆ✍️

LEAVE A REPLY

Please enter your comment!
Please enter your name here