ಕೂಡ್ಲಿಗಿ ತಾಲೂಕಿನ ಜನತೆಗೆ ಐತಿಹಾಸಿಕ ದಿನ 74 ಕೆರೆಗಳಿಗೆ ಹರಿಯುವಳು ಗಂಗೆ.!!

0
134

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಪಾಲಯ್ಯನಕೋಟೆಯಲ್ಲಿ (ಅಗಸ್ಟ್-15) 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಎನ್ ವೈ.ಗೋಪಾಲಕೃಷ್ಣ ಅವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 74 ಕೆರೆಗಳಿಗೆ ಸಮಗ್ರ ನೀರು ತುಂಬುವ ಯೋಜನೆ ₹670 ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕೂಡ್ಲಿಗಿ ಕ್ಷೇತ್ರಕ್ಕೆ ನಾನು ಚುನಾವಣೆಗೋಸ್ಕರ ರಾಜಕಾರಣ ಮಾಡುವುದಿಲ್ಲ, ಜನಪರ ಕಾಳಜಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತೇನೆ ಬಡರೈತರ, ಕೂಲಿಕಾರ್ಮಿಕರ ಪರಿಸ್ಥಿತಿ ಗೊತ್ತು ನನಗೂ ಹಸಿವನ ಬೆಲೆ ಗೊತ್ತಿದೆ ಈಗಾಗಿಯೇ ಇಂತಹ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ, ಸರ್ಕಾರ ನಿಗದಿ ಮಾಡಿರುವ ಅವದಿಗೆ ಮುನ್ನವೇ ಕೆರೆಗಳಿಗೆ ನೀರುಣಿಸುವ ಕಾಮಗಾರಿಯನ್ನು ೧೮ ತಿಂಗಳುಗಳೊಳಗೆ ಪೂರ್ಣಗೊಳಿಸುವ ಗುರಿ ಇದ್ದು ಇದಕ್ಕೆ ಸಾರ್ವಜನಿಕರ, ರೈತರ ಸಹಕಾರ ಮುಖ್ಯವಾಗಿದೆ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಭಾವನಾತ್ಮಕವಾಗಿ ನುಡಿದರು.

ನಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕನಾಗಿದ್ದಾಗ ನಾಲ್ಕಾಣೆ ಕೆಲಸ ಮಾಡಿದ್ದೇನೆ, ಬಳ್ಳಾರಿ ಗ್ರಾಮಾಂತರ ಶಾಸಕನಾಗಿದ್ದಾಗ ಐವತ್ತು ಪೈಸೆ ಕೆಲಸ ಮಾಡಿದ್ದೇನೆ, ಕೂಡ್ಲಿಗಿ ಕ್ಷೇತ್ರದ ಶಾಸಕನಾಗಿ ನಾನು ಒಂದು ರೂಪಾಯಿ ಪೂರ್ಣ ಕೆಲಸ ಮಾಡಿದ ತೃಪ್ತಿ ಇದೆ. ಮುಂದಿನ ಬಾರಿ ಶಾಸಕನಾದರೆ 2 ರೂಪಾಯಿ ಕೆಲಸ ಮಾಡುವ ಉತ್ಸಾಹ ಇದೆ ಆ 2 ರೂಪಾಯಿ ಕೆಲಸ ಕೂಡ್ಲಿಗಿ ಕ್ಷೇತ್ರದಲ್ಲಿ ನೋಡಬೇಕೋ ಅಥವಾ ಬೇರೆ ಕ್ಷೇತ್ರದಲ್ಲಿ ನೋಡಬೇಕೋ ಅದು ನಿಮಗೆ ಬಿಟ್ಟಿದ್ದು ಎಂದು ಕ್ಷೇತ್ರದ ಮತದಾರರಿಗೆ ಮಾರ್ಮಿಕವಾಗಿ ಉದಾಹರಣೆ ನೀಡುವುದರ ಮೂಲಕ ಶಾಸಕರು ಮುಕ್ತವಾಗಿ ತಮ್ಮ ರಾಜಕೀಯ ಜೀವನವನ್ನು ಸಭೆಯಲ್ಲಿ ವಿವರಿಸಿದರು. ಕೂಡ್ಲಿಗಿ ಬೇರೆ ಅಲ್ಲ, ಕೊಟ್ಟೂರು ಬೇರೆ ಅಲ್ಲ ಕೊಟ್ಟೂರು ಕೆರೆಗೆ ನೀರು ತುಂಬಿಸಲು ನನ್ನ ಸಹಕಾರ ಇದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷವರ್ಧನ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ತಿಪ್ಪೇಸ್ವಾಮಿ, ತಾ.ಪಂ ಇಓ ಬಸಣ್ಣ, ಎಚ್ ರೇವಣ್ಣ, ಕೆ ಎನ್ ತಿಪ್ಪೇಸ್ವಾಮಿ, ಸೂರ್ಯ ಪಾಪಣ್ಣ, ಮಲ್ಲಿಕಾರ್ಜುನ್, ಮುಖಂಡರಾದ ವೀರನಗೌಡ, ಜಿ.ಪಂ ಮಾಜಿ ಸದಸ್ಯ ಮರಬನಹಳ್ಳಿ ಶಿವು, ತಾ.ಪಂ ಮಾಜಿ ಸದಸ್ಯ ಹೂಡೇಂ ಪಾಪನಾಯಕ್, ನಾಗರಕಟ್ಟೆ ಕೊಟ್ರೇಶ್ ಪಾಪಣ್ಣ, ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ, ಕಲ್ಲೇಶ್, ಮಲ್ಲೇಶ್ ,ರವಿಕುಮಾರ್, ಹನುಮಂತಪ್ಪ, ಜಗದೀಶ್, ಮುಖಂಡರುಗಳು, ರೈತ ಬಾಂಧವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್.

LEAVE A REPLY

Please enter your comment!
Please enter your name here