ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಸ್ಯಾನಿಟೈಸರ್ ಸಿಂಪರಣೆ

0
91

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ರಾಮಸಾಗರ ಹಟ್ಟಿ ಪ್ರೌಢಶಾಲೆಗೆ ಸರ್ಕಾರದ ಆದೇಶದಂತೆ ಕೆಲವು ತರಗತಿಗಳನ್ನು ಪ್ರಾರಂಭ ಮಾಡಲು ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳಿಗೆ ಕರೋನವೈರಸ್ ಹರಡದಂತೆ ಕೆಲವು ತರಗತಿಯ ಕೊಠಡಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ.ಎಸ್.ಪಿ ಜಿಲಾನ್ ಸ್ಯಾನಿಟೈಸರ್ ಸಿಂಪರಣೆ ಮಾಡಿಸಿದರು.

ಸಿಂಪರಣೆ ಮಾಡಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ಈಗಾಗಲೇ ಸರ್ಕಾರ ಆದೇಶ ಮಾಡಿರುವುದರಿಂದ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯು ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಮಕ್ಕಳಿಗೆ ಕರೋನ ವೈರಾಣು ಹರಡದಂತೆ ರಾಮಸಾಗರಹಟ್ಟಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ಸ್ವಚ್ಛತೆ ಮಾಡಿಸಿ ಸ್ಯಾನಿಟೈಸರ್ ಮಾಡಿಸಲಾಗಿದೆ.ಗ್ರಾಮ ಪಂಚಾಯಿತಿ ಸದಸ್ಯರಿಗೂ ಹಾಗೂ ಶಾಲೆ ಸಿಬ್ಬಂದಿಗಳಿಗೆ ಕೊರೋನಾ ಮೂರನೇ ಅಲೆ ವ್ಯಾಪಕವಾಗಿ ಹರಡುವುದರಿಂದ ಕರೋನಾ ನಿಯಮವನ್ನು ಪಾಲಿಸಿ.ನಿಮ್ಮ ಮಕ್ಕಳಿಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ತಪ್ಪದೇ ಶಾಲೆಗೆ ಕಳುಹಿಸಿರಿ ಎಂದು ಹೇಳಿ, ತಪ್ಪದೇ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸುಖಾಸುಮ್ಮನೆ ಗುಂಪುಗುಂಪಾಗಿ ಸೇರುವುದು ಮಾಡಬೇಡಿ, ನೀವೆಲ್ಲರೂ ಕರೋನಾ ನಿಯಮವನ್ನು ಪಾಲಿಸಿ ಕರೋನವನ್ನು ಹೊಡೆದೋಡಿಸಲು ಸಹಕರಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು,ಸಿಬ್ಬಂದಿ ವರ್ಗದವರು ಶಾಲೆಯ ಶಿಕ್ಷಕರು ಎಸ್ಡಿಎಂಸಿ ಅಧ್ಯಕ್ಷರು ಸದಸ್ಯರುಗಳು ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here