ಗರ ಬಡಿದಿರುವ ಗ್ರಾ.ಪಂ.ಗಜಾಪುರ ಗ್ರಾಮದಲ್ಲಿ ಗಲೀಜೇ ಗಲೀಜು, ಹೂಳಿನಿಂದ ಹೂತಿರುವ ಗಟಾರಗಳು

0
200

ವಿಜಯನಗರ ಜಿಲ್ಲೆ ಕಂದಗಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿ ಗಜಾಪುರ ಗ್ರಾಮದಲ್ಲಿ,ಎತ್ತ ನೋಡಿದರತ್ತ ಗಲೀಜು ನೀರಿನ ಗುಂಡಿಗಳು ಕಸದ ರಾಶಿಗಳು.ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳದ್ದೇ ದರ್ಬಾರು ಎನ್ನುತ್ತಾರೆ ಹೋರಾಟಗಾರ ಕೊಟ್ರೇಶ, ಸಂಬಂಧಿಸಿದಂತೆ ಗ್ರಾಪಂ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಅವರು ದೂರಿದ್ದಾರೆ.

ಗ್ರಾಮದಲ್ಲಿ ಎಲ್ಲೆಂದರಲ್ಲಿ ಬಚ್ಚಲ ಮೋರೆ ನೀರು ರಸ್ಥೆಯಲ್ಲಿ ಹರಿದಾಡುತ್ತಿದೆ,ಗಲ್ಲಿ ಗಲ್ಲಿ ಗಳಲ್ಲಿ ನೀರು ಕಸ ತುಂಬಿದ ಗುಂಡಿಗಳು ನಿರ್ಮಾಣವಾಗಿವೆ.ಗಜಾಪುರದ ಗಲ್ಲಿಗಳು ನೈರ್ಮಲ್ಯ ಕಾಣದ ಗಲೀಜು ತನ್ನ ಗತ್ತು ತೋರಿಸುತ್ತಿದೆ ಪರಿಣಾಮ ಬಹುತೇಕ ಗ್ರಾಮಸ್ಥರು ಹಲವು ತೊಂಗಳುಗಳಿಂದ ನಿರಂತರ ಅನಾರೋಗ್ಯಕ್ಕೀಡಗುತ್ತಿದ್ದಾರೆ.
ರೈತರು ಕಾರ್ಮಿಕರೇ ಹೆಚ್ಚಿರುವ ಗ್ರಾಮದಲ್ಲಿ ರೋಗಗಳು ತಾಂಡವಾಡುತ್ತಿರುವುದರಿಂದಾಗಿ ಅವರು ಆರ್ಥಿಕ ಸಂಕಷ್ಟ ಅನುಭವುಸುವಂತಾಗಿದೆ ಮತ್ತು ನೆಮ್ಮದಿ ಕಾಣದಾಗಿದೆ.ಕೂಲಿ ನಾಲಿ ಮಾಡಿ ದುಡಿದು ಜೀವನ ಸಾಗಿಸುವ ಗ್ರಾಮಸ್ಥರು ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್ ಗಳಿಗೆ, ತಮ್ಮ ಬೆವರಿನ ಹಣ ವ್ಯಯ ಮಾಡೋದು ಸಾಮಾನ್ಯವಾಗಿದೆ.
ವರ್ಷಕ್ಕೊಮ್ನೆ ಜರುಗುವ ಗ್ರಾಮದ ಹಬ್ಬಕ್ಕೆ ಮಾತ್ರ ಕಸ ತೆಗೆಯೋದು,ಗ್ರಾಮ ಸ್ವಚ್ಚವಾಗೋದು ಅಲ್ಲಿವರೆಗೆ ಕಸದ ರಾಶಿ ಗುಂಡಿಗಳು ಕಾಣುತ್ತಿರುತ್ತವೆ.ಬಹುತೇಕ ಕಡೆಗಳಲ್ಲ ಚರಂಡಿ ನಿರ್ಮಾಣವಾಗಬೇಕಿದೆ ಮತ್ತೆ ಹಲವೆಡೆಗಳಲ್ಲಿ ಹೂಳು ಹಾಗೂ ಕಸ ತುಂಬಿ ಮುಚ್ಚಿರುವ ಚರಂಡಿಗಳನ್ನು ಸ್ವಚ್ಚಗೊಳಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಪಂ ಸದಸ್ಯರು ಮುಗ್ದರಿದ್ದು ಅವರೂ ಸಾಕಷ್ಟು ಭಾರಿ ಗ್ರಾಪಂ ಅಧಿಕಾರಿಗೆ ನೈರ್ಮಲ್ಯತೆ ಕಪಡುವಂತೆ ಸೂಚಿದ್ದಾರಾದರೂ, ಗ್ರಾಪಂ ಅಧಿಕಾರಿ ಅವರಿಗೆ ಕಾಗ್ಗಕ್ಕ ಗುಬ್ಬಕ್ಕನ ಕಥೆ ಕಟ್ಟಿ ಜಾರಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ವರ್ಷಕ್ಕೊಮ್ಮೆ ಮಾತ್ರ ಚರಂಡಿಗಳ ಕಸ ತೆಗೆಯುವುದು ಪರಿಣಾಮ ನಿಂತ ನೀರಲ್ಲಿ ಕಸ ಕೊಳೆತು ಚರಂಡಿಗಳು ದುರ್ನಾಥ ಬೀರುತ್ತಿವೆ,ಸೊಳ್ಳೆಗಳು ಕ್ರಿಮಿಗಳು ತುಂಬಿದ ಚರಂಡಿಗಳಲ್ಲಿಯೇ ಆವುಗಳವಾಸ ಸ್ಥಾನವಾಗಿವೆ.ಇದರಿಂದಾಗಿ ತಮಗೆ ಆಸ್ಪತ್ರೆಗೆ ಅಲೆಯೋ ವನವಾಸ ತಪ್ಪಿದ್ದಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಗಜಾಪುರ ಗ್ರಾಮಸ್ಥರು.

ಸಂಬಂದಿಸಿದಂತೆ ತಾಪಂ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಬೇಟ್ಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ,ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪರಿಸ್ಥಿತಿ ಅವಲೋಕಿಸಿ ನಿರ್ಲಕ್ಷ್ಯ ಧೊರಣೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನ ಶೀಘ್ರವೇ ಬದಲಿಸಬೇಕೆಂದು ಗ್ರಾಮಸ್ಥರು ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು ಈ ಮೂಲಕ ಆಗ್ರಹಿಸಿದ್ದಾರೆ.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here