ಬಳ್ಳಾರಿಯಲ್ಲಿ ರೌಡಿಗಳ ಪರೇಡ್ ಬಾಲ ಬಿಚ್ಚಿದ್ರೇ ಗಡಿಪಾರು : ಎಎಸ್ಪಿ ಗುರುನಾಥ ಮತ್ತೂರು ಎಚ್ಚರಿಕೆ

0
73

ಬಳ್ಳಾರಿ,ಮೇ 30 : ಬಳ್ಳಾರಿ ನಗರದ ಡಿಎಆರ್ ಕವಾಯಿತು ಮೈದಾನದಲ್ಲಿ ರೌಡಿಗಳ ಪರೇಡ್ ಸೋಮವಾರ ನಡೆಯಿತು.
ಎಸ್ಪಿ ಸೈದುಲು ಅಡಾವತ್ ಅವರ ನಿರ್ದೇಶನದ ಅನುಸಾರ ರೌಡಿಗಳ ಪರೇಡ್ ನಡೆಸಲಾಯಿತು.

ಎಎಸ್ಪಿ ಗುರುನಾಥ ಮತ್ತೂರು ಅವರು ರೌಡಿಗಳ ಪರೇಡ್ ವೀಕ್ಷಿಸಿದರು.
ರೌಡಿಗಳು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದರೇ ಒಕೆ;ಅದನ್ನು ಬಿಟ್ಟು ಅನೈತಿಕ ಚಟುವಟಿಕೆಗಳಲ್ಲಿ ಮತ್ತು ಅಕ್ರಮ ಹಾಗೂ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದಲ್ಲಿ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ವರ್ತನೆಗಳನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ವರ್ತನೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ರಮೇಶಕುಮಾರ್,ಬಳ್ಳಾರಿ ನಗರದ ಇನ್ಸ್‍ಪೆಕ್ಟರ್‍ಗಳು,ಸಬ್‍ಇನ್ಸ್‍ಪೆಕ್ಟರ್‍ಗಳು,ಪಿಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here