ತೋರಣಗಲ್ಲುನಲ್ಲಿ ಡಿವೈಎಫ್ಐ ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮ

0
477

ಸಂಡೂರು:ತೋರಣಗಲ್ಲು:ಆಗಸ್ಟ್.08: ತೋರಣಗಲ್ಲುನಲ್ಲಿ ದಿನಾಂಕ 08.08.2021 ನಗರದಲ್ಲಿ ಪಿ.ಯು.ಸಿ.ಕಾಲೇಜ್ ಗಾಗಿ ಆಗ್ರಹಿಸಿ,ನಿರುದ್ಯೋಗಿ ಯುವಜನತೆಗೆ ಉದ್ಯೋಗಕ್ಕಾಗಿ ಒತ್ತಾಯಿಸಿ ಎಂಬ ಘೋಷಣೆಯೊಂದಿಗೆ DYFI ನ ತೋರಣಗಲ್ಲು ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಸಮ್ಮೇಳನದ ಉದ್ಘಾಟನೆಯನ್ನು ಕಾಮ್ರೇಡ್ ವಸಂತ ಕಲಾಲ್ JNU ನವದೆಹಲಿ ನೀತಿ ನಿರೂಪಣೆ ಸಮಿತಿ ಸದಸ್ಯರು ಇವರು ಮಾತನಾಡುತ್ತ 1980 ನವ್ಹಂಬರ್ 3 ರಂದು ಪಂಜಾಬಿನ ಲೂದಿಯಾನದಲ್ಲಿ ಕೆಲವು 8 ಜನ ಯುವಕರಿಂದ ಆರಂಭವಾದ ಈ DYFI ಸಂಘಟನೆ ಅಂದಿನಿಂದ ಇಂದಿನವರೆಗೂ ನಿರುದ್ಯೋಗ ಸಮಸ್ಯೆ,ಅಸಮಾನತೆ,ಜಾತಿ ತಾರತಮ್ಯ ವಿರುದ್ದ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಾ ದೇಶದ ಉದ್ದಗಲಕ್ಕೂ ಬೇರೆ ಬೇರೆ ರಾಜ್ಯ,ಜಿಲ್ಲೆಗಳ ಮೂಲೆಯಲ್ಲಿ DYFI ಸಂಘಟನೆ ವಿಸ್ತಾರವಾಗಿದೆ ಅದೇ ರೀತಿ‌ ಈ ಸಮ್ಮೇಳನದ ಭೇಡಿಕೆ PUC ಕಾಲೇಜು ನಿರ್ಮಾಣವಾಗಲೆಂದು ಕರೆನಿಡಿದರು,

DYFI ನ ಸಂಡೂರು ತಾಲ್ಲೂಕು ಸಹಾ ಕಾರ್ಯದರ್ಶಿ ಸೈಯದ್ ಶರೀಪ್ ಮಾತನಾಡಿ ಈ ಹಿಂದೆ ಮೊದಲ ಸಂಡೂರು ತಾಲ್ಲೂಕು ಸಮ್ಮೇಳನದಲ್ಲಿ ತಾಂತ್ರಿಕ ಶಿಕ್ಷಣ ಒದಗಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು ಇದರ ಮುಂದಿನ ಹೋರಾಟದ ಪ್ರತಿಫಲವಾಗಿ ತೋರಣಗಲ್ಲು ಗ್ರಾಮದಲ್ಲಿ ITI ಕಾಲೇಜು ಆರಂಭವಾಗಿದ್ದು ಸ್ವಾಗತರ್ಹ, ಹಾಗೇಯೇ ಪ್ರತ್ಯೇಕ DIPLOM, ITI ಕಾಲೇಜು ಕಟ್ಟಡಗಳು ನಿರ್ಮಾಣವಾಗುವುದರ ಜೋತೆಗೆ PUC ಕಾಲೇಜು ಆರಂಭ ಮಾಡಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

DYFI ನ ಸಂಡೂರು ತಾಲ್ಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು,DYFI ನ ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕ ಕಾರ್ಯದರ್ಶಿ ಕೆ.ರಮೇಶ ರವರು ನೂತನ DYFI ನ ತೋರಣಗಲ್ಲು ಗ್ರಾಮ ಘಟಕ ಪದಾಧಿಕಾರಿಗಳ ಘೋಷಣೆ ಮಾಡಿದರು. ನೂತನ ಘಟಕವನ್ನು ಶುಭಹಾರೈಸಿ ಮಾನ್ಯ ಜೆ.ಎಮ್.ಚೆನ್ನಬಸಯ್ಯ CITU ಸಂಡೂರು ಇವರು ಮಾತನಾಡಿದರು ಗ್ರಾಮ ಘಟಕ ಸೌಹಾರ್ದವಾಗಿ ಬೆಂಬಲಿಸಿ ಎ.ಸ್ವಾಮಿ DHS ಸಂಡೂರು ಇವರು ಮಾತನಾಡಿದರು.

ಈ ಸಮ್ಮೇಳನದ ಅಧ್ಯಕ್ಷತೆಯನ್ನು DYFI ಸಂಡೂರು ತಾಲ್ಲೂಕು ಅಧ್ಯಕ್ಷರು ಎಸ್.ಕಾಲೂಬರವರು ವಹಿಸಿದ್ದರು,ನೂತನ ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರು ಶಿವರೆಡ್ಡಿರವರು ಸ್ವಾಗತಿಸಿದರು,ಸಹಾ ಕಾರ್ಯದರ್ಶಿಗಳಾದ ಕುಮಾರ್ ನಾಯ್ಕ್ ನಿರೂಪಿಸಿದರು ಪ್ರೇಮ್ ರವರು ವಂದಿಸಿದರು. ಅನಿಲ್, ಲಕ್ಷ್ಮಿ, ಇತರರು ಭಾಗವಹಿಸಿದ್ದರು..

ತೋರಣಗಲ್ಲು ಗ್ರಾಮದ DYFI ನ ಘಟಕದ ನೂತನ ಪದಾಧಿಕಾರಿಗಳು….
ಅಧ್ಯಕ್ಷರು-ಶಿವರೆಡ್ಡಿ, ಕಾರ್ಯದರ್ಶಿ-ಹುಲೇಪ್ಪ
ಉಪಾಧ್ಯಕ್ಷರುಗಳು-ಗಣೇಶ್, ಸಂತೋಷ, ವೆಬಕುಮಾರಿ,ಪಾಲ್ ಪಕ್ಕೀರ, ಅಮರ್
ಸಹಾ ಕಾರ್ಯದರ್ಶಿಗಳು:-ಪ್ರೇಮ್ ಕುಮಾರ್, ಕುಮಾರ್ ನಾಯ್ಕ, ಹುಸೇನ್‌.ಬಿ, ಅಭಿಶೇಕ್, ಷಣ್ಮುಖ, ಖಜಾಂಚಿ-ದೊಡ್ಡಬಸವ,
ಸಾಂಸ್ಕೃತಿಕ ಕಾರ್ಯದರ್ಶಿ-D.T. ರಮೇಶ್ ನಾಯ್ಕ್ ,ಕ್ರೀಡಾಕಾರ್ಯದರ್ಶಿ-ನಾಗಭೂಷಣ
ಗೌರವ ಸದಸ್ಯರುಗಳು:-ಶಿವುಕುಮಾರ್, ರವಿ, ಪೂಜಾ, ಅರ್ಪಿತ, ಭಾಷ, ಕಲಾವತಿ, ಚಂದ್ರು,

LEAVE A REPLY

Please enter your comment!
Please enter your name here