ಗಣೇಶ ಹಬ್ಬವನ್ನು ಲಸಿಕಾ ಹಬ್ಬದಂತೆ ಆಚರಿಸಿ, ಸೆಪ್ಟೆಂಬರ್ 15 ಒಳಗೆ ಎಲ್ಲರೂ ಲಸಿಕೆ ಪಡೆದು ಕೊಳ್ಳಿ ಡಾ.ಪೂಜಾ,

0
362

ಸಂಡೂರು:ಸೆ:-ಸಂಡೂರು ತಾಲೂಕಿನ ಮೆಟ್ರಿಕಿ ವ್ಯಾಪ್ತಿಯ ಹತ್ತು ಹಳ್ಳಿಗಳ ಆರೋಗ್ಯ ಸೇವೆ ಒದಗಿಸುತ್ತಿರುವ ಸ್ಕ್ವಾಡೆಸ್ ಮೊಬೈಲ್ ಮೆಡಿಕಲ್ ಯುನಿಟ್ ತಂಡ ನಿಗದಿಪಡಿಸಿದಂತೆ ಇಂದು ತಾಲೂಕಿನ ಉಬ್ಬಳಗಂಡಿ ಗ್ರಾಮದಲ್ಲಿ ಕರ್ತವ್ಯದ ಸಂದರ್ಭದಲ್ಲಿ ಡಾ.ಪೂಜಾ ಅವರು ಸಾರ್ವಜನಿಕರಿಗೆ ಕೋವಿಡ್ ಲಸಿಕಾ ಮೇಳ ಕುರಿತು ಮಾತನಾಡುತ್ತಾ ಹಬ್ಬದ ದಿನಗಳನ್ನು ಮೂರನೆಯ ಅಲೆಯ ಎಚ್ಚರಿಕೆಯ ದಿನಗಳೆಂದು ತಿಳಿದು, ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿ ಕೊಳ್ಳುವಂತೆ ತಿಳಿಸಿದರು, ಮೂರನೇ ಅಲೆಯ ಮುನ್ಸೂಚನೆ ಕಂಡು ಬರುತ್ತಿದ್ದು ಕೋವಿಡ್ ಲಸಿಕೆ ಬಗ್ಗೆ ನಿರ್ಲಕ್ಷ ಬೇಡ, ಗಣೇಶ ಹಬ್ಬದ ಸಂದರ್ಭವನ್ನು ಕೋವಿಡ್ ಲಸಿಕೆ ಹಬ್ಬವಾಗಿ ಆಚರಿಸೋಣ ಎಂದು ತಿಳಿಸಿದರು, ಹಾಗೇ ಸಂಡೂರು ತಾಲ್ಲೂಕಿನ ಪ್ರತಿ ಹಳ್ಳಿಗೂ ಮೊಬೈಲ್ ಮೆಡಿಕಲ್ ವಾಹನಗಳು ಸಂಚರಿಸುತ್ತಿವೆ ಸ್ಥಳದಲ್ಲೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಅದರ ಸೇವೆಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್ ವೀರೇಶ್, ಸದಸ್ಯ ರಾಮಪ್ಪ,ಮುಖಂಡರಾದ ರಾಮಾಂಜಿನಿ, ಮಾರೆಣ್ಣ, ನಾಗರಾಜ, ವಿಶಾಲಾಕ್ಷಿ, ಶಿವಮ್ಮ, ಈರಮ್ಮ,ಸ್ಕ್ವಾಡೆಸ್ ಮೊಬೈಲ್ ಮೆಡಿಕಲ್ ಯುನಿಟ್ ನ ಡಾ.ಪೂಜಾ, ಸ್ಟಾಪ್‌ ನರ್ಸ್ ಪವಿತ್ರ, ಲ್ಯಾಬ್ ಟೆಕ್ನಾಲಜಿಸ್ಟ್ ನಾಗವೇಣಿ, ಪಾರ್ಮಾಸಿಸ್ಟ್ ಶೃತಿ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಲತಾ, ಶರತ್ ಕುಮಾರ್, ಆಶಾ ಕಾರ್ಯಕರ್ತೆ ಈರಮ್ಮ, ರಾಮಕ್ಕ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here