ನಶೆ ಮುಕ್ತ ಸಮಾಜ ರೂಪಿಸಲು ಯುವಕರಿಗೆ ಕರೆ

0
516

ಸಂಡೂರು: ಜೂ:24: ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ತೋರಣಗಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಜೂನ್ 26 ರ ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಅಕ್ರಮ ಸಾಗಣೆ ವಿರೋಧಿ ದಿನ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ,ಯುವ ಸಮುದಾಯಕ್ಕೆ ಮಾರಕವಾಗಿರುವ, ಮತ್ತು ಅವರ ಜೀವನದ ಹಾದಿ ತಪ್ಪಿಸುತ್ತಿರುವ ಮಾದಕ ದ್ರವ್ಯಗಳ ಹಾವಳಿ ತಪ್ಪಿಸಿ “ನಶೆ ಮುಕ್ತ ರಾಷ್ಟ್ರ” ನಿರ್ಮಾಣ ಮಾಡಲು ಸರ್ವರೂ ಸಂಕಲ್ಪ ಮಾಡಬೇಕಿದೆ, ಮುಖ್ಯವಾಗಿ ಯುವಜನತೆಯನ್ನು ಮಾದಕವಸ್ತುಗಳಿಂದ ರಕ್ಷಿಸಬೇಕಿದೆ,ಮಾದಕ ವಸ್ತುಗಳ ಸೇವನೆಯಿಂದ ಕುಟುಂಬ ಸರ್ವನಾಶವಾಗುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕವಾಗಿದೆ, ಮಾದಕ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜಾಲಗಳ ಪತ್ತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ, ಯುವಕರು ತಮ್ಮ ಭವಿಷ್ಯದ ಹೆಚ್ಚಿನ ಗಮನವಿಟ್ಟು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು,ಮಾದಕ ದ್ರವ್ಯಗಳ ಸೇವನೆಯ ಇತರರನ್ನು ಅನುಕರಣೆ ಮಾಡುವುದಾಗಲಿ, ಸೇವಿಸುವಂತೆ ಪ್ರಚೋದಿಸುವುದಾಗಲಿ ಮಾಡುವವರನ್ನು ವಿರೋಧಿಸಬೇಕು, ಎನ್.ಡಿ.ಪಿ.ಎಸ್ ಆಕ್ಟ್ 1985 ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಾಗ ಯುವಜನತೆಯ ಆರೋಗ್ಯ ರಕ್ಷಣೆ ಸಾಧ್ಯ ವಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಆನಿಸ್ ಪಾತಿಮಾ ಅವರು ಮಾತನಾಡಿ ಯುವ ಸಮುದಾಯಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ ಅವರ ಜೀವನ ಉತ್ತಮವಾದ ದಾರಿಯಲ್ಲಿ ಸಾಗಲು ಸಹಕಾರಿಯಾಗಲಿವೆ, ಮಾದಕ ದ್ರವ್ಯ ಸೇವನೆಯಿಂದ ತಂದೊಡ್ಡಬಹುದಾದ ಅನಾಹುತಗಳನ್ನು ಯುವಕರಿಗೆ ತಿಳಿಸುವ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು, ನಂತರ “ನಶೆ ಮುಕ್ತ ಸಮಾಜ ನಿರ್ಮಾಣ ಕುರಿತು ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರ್.ಕೆ.ಎಸ್.ಕೆ ಕೌನ್ಸಲರ್ ಪ್ರಶಾಂತ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನಾಗರತ್ನ, ನಿರೀಕ್ಷಾಧಿಕಾರಿ ನಿಜಾಮುದ್ದೀನ್, ಪ್ರೌಢಶಾಲೆಯ ಶಿಕ್ಷಕರಾದ ಅನಿಸ್ ಫಾತಿಮಾ,ವಿಜಯ ಕುಮಾರ್, ಶಾಂತಲಾ,ಕೆ.ಎರ್ರಿಸ್ವಾಮಿ, ವೀರಣ್ಣ, ದೊಡ್ಡಬಸವ, ಜಬೀಉಲ್ಲಾ, ಶಶಿಕಲಾ, ಸಾವಿತ್ರಿ, ಆಶಾ ಕಾರ್ಯಕರ್ತೆ ಎರ್ರಮ್ಮ,ಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here