ಓದುಗರ ಒಲುಮೆಗೆ ಪಾತ್ರರಾದ ರಾಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್

0
118

ಚಿತ್ರದುರ್ಗ: ಆಗಸ್ಟ್ ;01.ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಶನಿವಾರದಂದು ಗ್ರಂಥಾಲಯ ಪ್ರಾರಂಭಿಸಲಾಗಿದ್ದು

ಗ್ರಾಮದ ವಿಜಯ ಮಹಂತೇಶ್ವರ ನಗರದಲ್ಲಿರುವ ವಾಲ್ಮೀಕಿ ಭವನವು ಉಪಯೋಗಕ್ಕೆ ಬಾರದೇ ಇರುವುದನ್ನು ಮನಗಂಡ ಪೊಲೀಸ್ ತಿಮ್ಮ ಬ್ರಿಗೇಡ್ ಸಾಂಸ್ಕೃತಿಕ ಕಲಾ ಸಂಘದ ಯುವಕರು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಿ ಗ್ರಂಥಾಲಯದ ಪರಿವರ್ತನೆಗೆ ಮನವಿ ಸಲ್ಲಿಸಿದ್ದರು.

ಕೂಡಲೇ ಗ್ರಾಮಪಂಚಾಯಿತಿಯು ಗ್ರಂಥಾಲಯಕ್ಕೆ ಅಗತ್ಯ ನೆರವು ನೀಡುವುದರ ಮೂಲಕ ಗ್ರಂಥಾಲಯ ಪ್ರಾರಂಭಕ್ಕೆ ಸಹಕಾರ ನೀಡಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ಗ್ರಾಮದಲ್ಲಿ ವಿದ್ಯಾರ್ಜನೆಗಾಗಿ ಗ್ರಂಥಾಲಯ ತೆರೆಯಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು… ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಪ್ರಚಲಿತ ಜ್ಞಾನ ಅವಶ್ಯಕತೆ ಇದ್ದು ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಓದಿ ಸಿಇಟಿ ಪರೀಕ್ಷೆಗೆ ಯುವಕರು ಪ್ರೇರಣೆಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಡಿಓ ನೂರುಲ್ಲಾ ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್ ಮೂರ್ತಿ ಮಂಜಣ್ಣ ಕೊಲ್ಲರಪ್ಪ ಊರಿನ ಮುಖಂಡರಾದ ಮರಿಸ್ವಾಮಿ, ಶಿವಣ್ಣಗೌಡ, ಕಾಂತರಾಜ್, ಲಕ್ಷ್ಮಣ್, ಜಗದೀಶ, ಅಂಜಿನಿ, ಲೋಹಿತ್, ಸರ್ವೆ ಅಧಿಕಾರಿ ಶಿವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:-ನಂದೀಶ್ ನಾಯಕ
ಸ್ಟೇಟ್ ಕ್ರೈಂ ರಿಪೋರ್ಟರ್

LEAVE A REPLY

Please enter your comment!
Please enter your name here