ಸವಾಲುಗಳ ನಡುವೆ ಅಭಿವೃದ್ಧಿಯತ್ತ ವಿಜಯನಗರ ಜಿಲ್ಲೆ:ಸಚಿವ ಸಿಂಗ್

0
104

ಹೊಸಪೇಟೆ,ಆ.15: ಕೋವಿಡ್ ಸೇರಿದಂತೆ ಅನೇಕ ಸವಾಲುಗಳ ನಡುವೆಯೂ ವಿಜಯನಗರ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲಿರಿಸಿದೆ ಎಂದು ಪರಿಸರ,ಜೀವಿಶಾಸ್ತç ಹಾಗೂ ಪ್ರವಾಸೋದ್ಯಮ,ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿ0ಗ್ ಅವರು ಹೇಳಿದರು.
ನೂತನ ವಿಜಯನಗರ ಜಿಲ್ಲೆಯ ಮೊದಲ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣವನ್ನು ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಭಾನುವಾರ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಕಾಲದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಇಲ್ಲಿಯವರೆಗೂ 83,539 ಹೆಕ್ಟೇರ್‌ಗಳ ಪ್ರದೇಶದಲ್ಲಿ ಶೇ. 60 ರಷ್ಟು ಬಿತ್ತನೆಯಾಗಿದೆ. ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ಭತ್ತ ನಾಟಿ ಕಾರ್ಯವು ಪ್ರಗತಿಯಲ್ಲಿದೆ.ಈ ಹಂಗಾಮಿನಲ್ಲಿ 7,269 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ 17,495 ರೈತರಿಗೆ ವಿತರಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ 3 ಕಂತಿನ (ಪ್ರತಿ ಕಂತಿಗೆ 2000/-) ಪ್ರಕಾರ 1 ರಿಂದ 8ನೇ ಕಂತಿನ ವರೆಗೆ ಇಲ್ಲಿಯವರೆ ಒಟ್ಟು 85,919 ರೈತರಿಗೆ ರೂ. 95.165 ಕೋಟಿ ರೈತರಿಗೆ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರದಿಂದ ಪಿ.ಎಂ.ಕಿಸಾನ್ ಯೋಜನೆಯಡಿ ವರ್ಷಕ್ಕೆ 2 ಕಂತಿನ ಪ್ರಕಾರ ಅನುದಾನವನ್ನು 68,176 ರೈತರಿಗೆ ರೂ. 26.62 ಕೋಟಿಗಳ ಅನುದಾನ ವರ್ಗಾವಣೆಯಾಗಿದೆ.
ಬೆಳೆ ಸಮೀಕ್ಷೆಯಲ್ಲಿ 2020-21ನೇ ಸಾಲಿನಲ್ಲಿ ತಾಲ್ಲೂಕುಗಳಲ್ಲಿ ರೈತರು ತಮ್ಮ ಜಮೀನಿನಗಳಲ್ಲಿ ಬೆಳೆದ ಬೆಳೆಗಳ ಒಟ್ಟು 1,99,080 ಛಾಯಚಿತ್ರವನ್ನು ಬೆಳೆಸಮೀಕ್ಷೆ ಮೊಬೈಲ್ ಆಪ್‌ನಲ್ಲಿ ದಾಖಲಿಸಲಾಗಿದೆ.
ಮಹಾತ್ಮಗಾಂಧೀ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ:ನರೇಗಾ ಯೋಜನೆ ಅಡಿ 2021-22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ 1283 ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣ ಮಾಡಲಾಗಿದೆ. 200 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
ಒಟ್ಟು 2,52,988 ಮಾನವ ದಿನಗಳನ್ನು ಸೃಜಿಸಿ ಆರ್ಥಿಕ ಒಟ್ಟು ರೂ. 745.97 ಲಕ್ಷಗಳ ವೆಚ್ಚವನ್ನು ಭರಿಸಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
*ಕೋವಿಡ್ ಸಮರ್ಥ ನಿರ್ವಹಣೆ: ವಿಜಯನಗರ ಜಿಲ್ಲೆಯಲ್ಲಿ ಕೋವಿಡ್-19 ರ 2 ನೇ ಅಲೆಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ 09 ಡಿ.ಸಿ.ಹೆಚ್.ಸಿ, 04 ಖಾಸಗಿ ಡಿ.ಸಿ.ಹೆಚ್. ಸೇರಿದಂತೆ 140 ಸಾಮಾನ್ಯ ಬೆಡ್‌ಗಳು, 346 ಆಕ್ಸಿನೇಟೆಡ್ ಬೆಡ್‌ಗಳು, 14 ಐ.ಸಿ.ಯು ವೆಂಟಿಲೇಟರ್ ರಹಿತ ಬೆಡ್‌ಗಳು ಹಾಗೂ 36 ಐ.ಸಿ.ಯು ವೆಂಟಿಲೇಟರ್ ಬೆಡ್‌ಗಳು ಹೀಗೆ ಒಟ್ಟು 492 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
ಒಟ್ಟು 11,21,195 ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿಯಿದ್ದು, ಇದರಲ್ಲಿ 5,05,908 ಮೊದಲನೆಯ ಡೋಸ್ ಹಾಗೂ 1,46,845 ಎರಡನೆಯ ಡೋಸ್ ಹೀಗೆ ಒಟ್ಟು 6,55,460 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಉಸಿರಾಟದ ತೊಂದರೆಯ ಪ್ರಕರಣಗಳನ್ನು ನಿಭಾಯಿಸಲು ಹೊಸಪೇಟೆಯ ಎಂ.ಸಿ.ಹೆಚ್ ಆಸ್ಪತ್ರೆಯಲ್ಲಿ 2,000 ಲೀಟರ್ ಆಕ್ಸಿಜನ್ ಪ್ಲಾಟ್‌ಗಳನ್ನು ಸ್ಥಾಪಿಸಲಾಗಿದೆ.
ನಗರದಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಅನುಮೋದನೆ ದೊರೆತಿದೆ ಹಾಗೂ 60 ಎನ್.ಸಿ.ಹೆಚ್ ಆಸ್ಪತ್ರೆಯ ಕಾಮಗಾರಿಯು ಅಂತಿಮ ಹಂತದ ಪ್ರಗತಿಯಲ್ಲಿದೆ ಎಂದರು.
ಕೋವಿಡ್ 19 ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ತೋರಣಗಲ್ಲಿನಲ್ಲಿ ಜಿಂದಾಲ್ ಉಕ್ಕು ಕಾರ್ಖಾನೆ ಸಹಕಾರದೊಂದಿಗೆ 1ಸಾವಿರ ಹಾಸಿಗೆಗಳ ಆಕ್ಸಿಜನ್ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಸ್ಥಾಪಿಸಲಾಗಿತ್ತು.
ಕೋವಿಡ್ 3ನೇ ಅಲೆ ನಿಯಂತ್ರಿಸಲು ಅವಳಿ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ 100 ಹಾಸಿಗೆಯ ಆಕ್ಸಿಜನ್ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಗಳನ್ನು ಸಿದ್ದತೆಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ವತಿಯಿಂದ ರೂ.244 ಕೋಟಿ ವೆಚ್ಚದಲ್ಲಿ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ನೀರನ್ನು ಎತ್ತಿ ಶಾಶ್ವತ ಕುಡಿಯುವ ನೀರು ಪೂರೈಸುವ ಹಾಗೂ 22 ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
*ಜಿಲ್ಲಾ ಖನಿಜ ಪ್ರತಿಷ್ಠಾನ: ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ 2015-16ನೇ ಸಾಲಿನಿಂದ ಈವರೆಗೂ 1,635.94 ಕೋಟಿ ರೂಪಾಯಿಗಳು ಸಂಗ್ರಹವಾಗಿರುತ್ತವೆ. ಸದರಿ ಸಂಗ್ರಹವಾದ ಮೊತ್ತದಲ್ಲಿ 6 ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು, ಸದರಿ ಯೋಜನೆಯ ಒಟ್ಟು
ಮೊತ್ತ 2,222.15 ಕೋಟಿಗಳಾಗಿರುತ್ತದೆ. ನಗರದಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು 104 ಕೋಟಿಗೆ ಅನುಮೋದನೆ ದೊರೆತಿದೆ ಹಾಗೂ 60 ಎನ್.ಸಿ.ಹೆಚ್ ಆಸ್ಪತ್ರೆಯ ಕಾಮಗಾರಿಯು ಅಂತಿಮ ಹಂತದ ಪ್ರಗತಿಯಲ್ಲಿದೆ ಎಂದರು.
ಈವರೆಗೂ ಒಟ್ಟಾರೆಯಾಗಿ 1980 ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡಲಾಗಿದ್ದು, ಇದರಲ್ಲಿ 298 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 311 ಕಾಮಗಾರಿಗಳೂ ಪ್ರಗತಿಯಲ್ಲಿರುತ್ತವೆ. ಈ ಎಲ್ಲಾ ಕಾಮಗಾರಿಗಳಿಗೆ ಈ ವರೆಗೆ ಒಟ್ಟಾರೆಯಾಗಿ 186.88 ಕೋಟಿಗಳ ಅನುದಾನವನ್ನು ಸಂಬAಧಪಟ್ಟ ಅನುಷ್ಠಾನಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ನಿರುದ್ಯೋಗಿ/ಪ್ರತಿಭಾವAತ ಯುವಕ/ಯುವತಿಯರಿಗೆ ಐಎಎಸ್/ಕೆಎಎಸ್ ಹಾಗೂ ಇತರೆ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ವೃತ್ತಿಪರ ಸಂಸ್ಥೆಗಳ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಸದರಿ ನಿಧಿಯಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಡಿ 150 ಅಭ್ಯರ್ಥಿಗಳಿಗೆ ಐ.ಎ.ಎಸ್. ಮತ್ತು ಕೆ.ಎ.ಎಸ್. ಪರೀಕ್ಷಾ ಪೂರ್ವ ತರಬೇತಿ ಯಶಸ್ವಿಯಾಗಿ ನೀಡಲಾಗಿದೆ ಎಂದರು.
*ಕಾರ್ಮಿಕ ಇಲಾಖೆ: ಕಾರ್ಮಿಕ ಇಲಾಖೆ ಮೂಲಕ ಕೋವಿಡ್-19ರ ಹಿನ್ನೆಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ರೂ.5 ಸಾವಿರಗಳಂತೆ 23101 ಕಾರ್ಮಿಕರಿಗೆ 12 ಕೋಟಿ ಪರಿಹಾರವನ್ನು ನೀಡಲಾಗಿದೆ .
2ನೇ ಅಲೆಯ ಹಿನ್ನೆಲೆಯಲ್ಲಿ ರೂ.3 ಸಾವಿರಗಳಂತೆ 25436 ಕಾರ್ಮಿಕರಿಗೆ 8 ಕೋಟಿ ಪರಿಹಾರ ನೀಡಲಾಗಿದೆ.4493 ಮಡಿವಾಳರು ಮತ್ತು ಕ್ಷೌರಿಕರಿಗೆ ಪ್ರತಿಯೋಬ್ಬರಿಗೆ ರೂ5 ಸಾವಿರಂತೆ ಒಟ್ಟು ರೂ.2.25 ಕೋಟಿ ಪರಿಹಾರವನ್ನು ನೀಡಲಾಗಿದೆ. ಅಸಂಘಟಿತ 11 ವಲಯದ 6181 ಕಾರ್ಮಿಕರಿಗೆ ಪ್ರತಿಯೋಬ್ಬರಿಗೆ ರೂ.2 ಸಾವಿರರಂತೆ ಒಟ್ಟು ರೂ.1.75 ಕೋಟಿ ಪರಿಹಾರವನ್ನು ನೀಡೆಲಾಗಿದೆ.
ಇದಲ್ಲದೇ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 5000 ಸುರಕ್ಷ ಹಾಗೂ ನೈರ್ಮಾಲ್ಯೀಕರಣ ಕಿಟ್‌ಗಳನ್ನು ವಿತರಿಸಲಾಗದೆ ಹಾಗೂ 25710 ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ಷೀರ ಭಾಗ್ಯ-ಸೃಷ್ಠಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 9 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ 1682 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 6 ತಿಂಗಳಿನಿAದ 3 ವರ್ಷದ ಮಕ್ಕಳು 66262 ಫಲಾನುಭವಿಗಳು, 3 ರಿಂದ 6 ವರ್ಷ – 68182, ಗರ್ಭಿಣಿಯರು-16446 ಬಾಣಂತಿಯರು-13616 ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆ-1670, ಸಹಾಯಕಿಯರಿಗೆ-1577 ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಿಸಲಾಗಿದೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ನಿಮಿತ್ತ ಫಲಾನುಭವಿಗಳ ಮನೆಗೆ ಟಿ.ಹೆಚ್.ಆರ್ ಮುಖಾಂತರ ಪೂರಕ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ ವಿತರಣೆಗಾಗಿ ಪೌಷ್ಠಿಕ ಆಹಾರ ಯೋಜನೆ ಅಡಿಯಲ್ಲಿ ರೂ. 2684.96 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು ರೂ.1523.41 ಲಕ್ಷಗಳ ಅನುದಾನ ವೆಚ್ಚ ಭರಿಸಲಾಗಿದೆ. ಜಿಲ್ಲೆಯಲ್ಲಿ ಜುಲೈ-21 ರ ಅಂತ್ಯಕ್ಕೆ ಒಟ್ಟು 433 ಅಪೌಷ್ಠಿಕ ಮಕ್ಕಳಿದ್ದು ಅಪೌಷ್ಠಿಕ ಮಕ್ಕಳನ್ನು ಪೌಷ್ಠಿಕ ಮಟ್ಟಕ್ಕೆ ತರಲು ಬಾಲಚೈತನ್ಯ ಯೋಜನೆಯನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗಿದೆ ಎಂದರು.
ಭಾಗ್ಯಲಕ್ಷಿö್ಮ ಯೋಜನೆಯಡಿ ಪ್ರಾರಂಭದಿAದ 2006-07ನೇ ಸಾಲಿನಿಂದ 2021-22 ನೇ ಸಾಲಿನ ಜುಲೈ-21 ರ ಅಂತ್ಯಕ್ಕೆ 74675 ಫಲಾನುಭವಿಗಳಿಗೆ ಮಂಜೂರಾತಿ ನೀಡಿ 66974 ಬಾಂಡ್ ವಿತರಿಸಲಾಗಿದೆ. ಉಳಿದ 7701 ಬಾಂಡ್ ಎಲ್.ಐ.ಸಿ ಯಿಂದ ಬಾಂಡ್‌ಗಳು ಬರಬೇಕಾಗಿದೆ ಎಂದರು.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಸೆಪ್ಟಂಬರ್-2017 ರಿಂದ ಅನುಷ್ಠಾನಗೊಂಡಿದ್ದು, ಪ್ರತಿ ಮೊದಲನೇ ಗರ್ಭೀಣಿ ಫಲಾನುಭವಿಗಳಿಗೆ ರೂ.5 ಸಾವಿರಗಳಂತೆ ಮೂರು ಹಂತದಲ್ಲಿ ಹಣ ಮಂಜೂರು ಮಾಡಲಾಗುತ್ತಿದ್ದು, ಸದರಿ ಯೋಜನೆಯಡಿ 44122 ಫಲಾನುಭವಿಗಳು ಆನ್‌ಲೈನ್‌ನಲ್ಲಿ ನೊಂದಣೆಯಾಗಿದ್ದು, 33696 ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆದಿದ್ದಾರೆ ಎಂದರು.
*ಸಸ್ಯೋದ್ಧಾನ ನಿರ್ಮಾಣ: ಅರಣ್ಯ ಇಲಾಖೆಯ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದೊಂದಿಗೆ ಹೊಸಪೇಟೆ ತಾಲ್ಲೂಕಿನ ಗುಂಡಾ ಎಂಬಲ್ಲಿ ಸಸ್ಯೋಧ್ಯಾನ ನಿರ್ಮಾಣ ಮಾಡಲಾಗಿದೆ.
ಕೂಡ್ಲಿಗಿ ತಾಲ್ಲೂಕಿನ ಮರದೇವರ ಗುಡ್ಡದಲ್ಲಿ ಒಂದು ಸಸ್ಯೋಧ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಇದರೊಂದಿಗೆ ವನ್ಯ ಪ್ರಾಣಿ ಪ್ರೇಮಿಗಳಿಗಾಗಿ ದರೋಜಿ ಕರಡಿ ಧಾಮದಲ್ಲಿ ಜೀಪ್ ಸಫಾರಿಯನ್ನು ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
*ಸಮಾಜ ಕಲ್ಯಾಣ ಇಲಾಖೆ: ಸಮಾಜ ಕಲ್ಯಾಣ ಇಲಾಖೆ ಮೂಲಕ 39 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು, 23 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು, 01 ವಸತಿ ಶಾಲೆ, 07 ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳು 01 ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, 02 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು, 01 ಅಟಲ್ ಬಿಹಾರಿ ವಸತಿ ಶಾಲೆ, 01 ಇಂದಿರಾಗಾAಧಿ ವಸತಿ ಶಾಲೆಗಳು ಒಟ್ಟು 75 ವಿದ್ಯಾರ್ಥಿ ನಿಲಯ/ವಸತಿ ಶಾಲೆಗಳಿದ್ದು, 11,306 ವಿದ್ಯಾರ್ಥಿಗಳಿಗೆ ಊಟ ವಸತಿ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ರವರು ನಡೆಸುವ 10ನೇ ತರಗತಿ ಶೇ.60 ರಿಂದ ಶೇ.74.99 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಲಾ ರೂ.7,000/-ಗಳಂತೆ ಹಾಗೂ ಶೇ.75 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದಾರ್ಥಿಗಳಿಗೆ ರೂ.15,000/-ಗಳಂತೆ ಪ್ರೊತ್ಸಾಹ ಧನ ಮಂಜೂರು ಮಾಡಲು ಮಾಡಲಾಗುತ್ತಿದೆ ಎಂದರು.
2020-21ನೇ ಸಾಲಿಗೆ 2095 ವಿದ್ಯಾರ್ಥಿಗಳಿಗೆ 211 ಲಕ್ಷಗಳ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಪ್ರಥಮ ಪ್ರಯತ್ನದಲ್ಲಿ ದ್ವಿತೀಯ ಪಿ.ಯು.ಸಿ/ ಡಿಪ್ಲೋಮಾದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 20 ಸಾವಿರಗಳಂತೆ, ಪದವಿ ಪಾಸಾದ ವಿದ್ಯಾರ್ಥಿಗಳಿಗೆ 25 ಸಾವಿರಗಳಂತೆ, ಸ್ನಾತಕೋತ್ತರ ಪದವಿ ಪಾಸಾದ ವಿದ್ಯಾರ್ಥಿಗಳಿಗೆ 30 ಸಾವಿರಗಳಂತೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ 35 ಸಾವಿರಗಳಂತೆ ಸಹಾಯಧನ ನೀಡಲಾಗುತ್ತಿದ್ದು, 2020-21ನೇ ಸಾಲಿನಲ್ಲಿ 1648 ವಿದ್ಯಾರ್ಥಿಗಳಿಗೆ ರೂ.237 ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗಿದೆ.
ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 2020-21ನೇ ಸಾಲಿನಲ್ಲಿ 44 ದೇವದಾಸಿ ಮಕ್ಕಳ ವಿವಾಹ ದಂಪತಿಗಳಿಗೆ ರೂ.170 ಲಕ್ಷಗಳ ಸಹಾಯಧನ ನೀಡಲಾಗಿದೆ ಎಂದರು.
*ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಹಿಂದುಳಿ ವರ್ಗಗಳ / ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ 2020-21 ನೇ ಸಾಲಿಗೆ
ರೂ. 132.26 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ರೂ.132.26 ಲಕ್ಷಗಳನ್ನು ಖರ್ಚು ಮಾಡಿದೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು.
ಹೊಸಪೇಟೆ ಹೊರವಲಯದ ಜೋಳದರಾಶಿ ಗುಡ್ಡವನ್ನು ರೂ.24 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬAಧಿಸಿದ ಕಾಮಗಾರಿಗಳು ಜೋಳದರಾಶಿ ಗುಡ್ಡದಲ್ಲಿ ಬರದಿಂದ ಸಾಗಿವೆ ಎಂದರು.
ನಮ್ಮ ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ,ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ,ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

LEAVE A REPLY

Please enter your comment!
Please enter your name here