ಕ್ಷಯರೋಗ ಮುಕ್ತ ಗ್ರಾಮಕ್ಕೆ ಪ್ರತಿಯೊಬ್ಬರು ಕೈಜೋಡಿಸಿ

0
160

ಸಂಡೂರು:ಆಗಸ್ಟ್:25 ಕ್ಷಯ ಮುಕ್ತ ಗ್ರಾಮವನ್ನಾಗಿ ರೂಪಿಸಲು ಗ್ರಾಮ ಪಂಚಾಯಿತಿ ಸದಸ್ಯರ ಪಾತ್ರ ಕುರಿತು ಒಂದು ದಿನದ ತರಬೇತಿಯನ್ನು ದಿನಾಂಕ 24-08-2021 ರಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಬಳ್ಳಾರಿ, ಮತ್ತು ಸಮುದಾಯ ಆರೋಗ್ಯ ಕೇಂದ್ರ, ತೋರಣಗಲ್ಲು, ಹಾಗೂ ಮೈರಾಡ ಟಿಬಿ ರಿಚ್ ಸಂಸ್ಥೆ,ಢಣಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ತರಬೇತಿಯಲ್ಲಿ
ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಸಣ್ಣ ಕೇಶವ ಮಾತನಾಡಿ

ಕ್ಷಯರೋಗದ ಲಕ್ಷಣಗಳು ಇರುವವರು ಚಿಕಿತ್ಸೆ ಪಡೆಯದೇ ಇದ್ದು ಕೆಮ್ಮಿದಾಗ ಸೀನಿದಾಗ ಹೊರಬರುವ ತುಂತುರು ಹನಿಗಳಿಂದ ಗಾಳಿ ಮೂಲಕ ಸೋಂಕು ಇತರರಿಗೆ ಹರಡುತ್ತದೆ, ಸೋಂಕಿತರು ಹೆಚ್ಚಾಗುವರು, 2025 ಕ್ಕೆ ಕ್ಷಯಮುಕ್ತ ರಾಜ್ಯ ಮಾಡುವ ಗುರಿಯನ್ನು ಹೊಂದಿದ್ದೇವೆ, ಸೋಂಕಿತ ವ್ಯಕ್ತಿಗೆ ಲಕ್ಷಣಗಳು ಕಂಡು ಬಂದರೆ ತಕ್ಷಣ ತಪಾಸಣೆಗೆ ಒಳಗಾಗಬೇಕು, ಅಂತಹವರನ್ನು ಪತ್ತೆ ಹಚ್ಚುವ ಕಾರ್ಯ ಮತ್ತು ತಪಾಸಣೆಗೆ ಕಳಿಸಲು ಪಂಚಾಯಿತಿ ಸದಸ್ಯರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು, ಇದೆ ಸಂದರ್ಭದಲ್ಲಿ ಕ್ಷಯರೋಗ ಪ್ರಯೋಗಶಾಲಾ ತಂತ್ರಜ್ಞ ಮೇಲ್ವಿಚಾರಕ
ಚಂದ್ರಶೇಖರ್ ಮಾತನಾಡಿ ಕೆಮ್ಮು, ಜ್ವರ, ತೂಕ ಇಳಿಕೆ, ರಾತ್ರಿ ಬೆವರುವುದು, ಹಸಿವಾಗದಿರುವುದು, ಎದೆನೋವು, ಕಫದಲ್ಲಿ ರಕ್ತ ಮತ್ತು ಕತ್ತು ಮತ್ತು ಕಂಕುಳಲ್ಲಿ ಗಡ್ಡೆ, ಮುಂತಾದ ಲಕ್ಷಣ ಕಾಣಿಸಿಕೊಳ್ಳುತ್ತವೆ, ಈ ತರ ಲಕ್ಷಣ ಕಂಡು ಬಂದಾಗ ಕಫ ಪರೀಕ್ಷೆ ಮತ್ತು ಎಕ್ಸ್-ರೇ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು,

ಮೈರಾಡ ಸಂಸ್ಥೆಯ ಮಲ್ಲಿಕಾಜು೯ನ್ ಅವರು ಮಾತಾನಾಡಿ ಎಲ್ಲಾ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷಯ ರೋಗದ ಬಗ್ಗೆ ಯಾವ ಯಾವ ಕಾರ್ಯಕ್ರಮಗಳನ್ನು ಹಳ್ಳಿ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಹಾಗೂ ಸದಸ್ಯರುಗಳ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲಾಗುವುದೆಂದು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ್, ಸದಸ್ಯರು, ಕಾರ್ಯದರ್ಶಿ ಮತ್ತು ಆರೋಗ್ಯ ನಿರೀಕ್ಷಣ ಅಧಿಕಾರಿ ಬಸವರಾಜ
ಹಿರಿಯ ಚಿಕಿತ್ಸಾ ಮೆಲ್ವಿಚಾರಕ ಗೋಪಾಲ್, ಹಾಗೂ ಆಶಾ ಕಾರ್ಯಕರ್ತರಾದ ಶಾಂತಮ್ಮ, ಮಂಗಳ,ಹಂಪಮ್ಮ, ಅಂಗನವಾಡಿ ಕಾರ್ಯಕರ್ತರು ಮತ್ತು ಮೈರಾಡ ಸಂಸ್ಥೆಯ
ಮಂಜುನಾಥ , ರಮೇಶ ಗೋಣಿಸ್ವಾಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here