ಕೂಡ್ಲಿಗಿ ದೇವದಾಸಿ ಮಹಿಳಾ ಫಲಾನುಭವಿಗಳಿಂದ ಸಾವಿರಗಟ್ಟಲೆ ಹಣ ಸುಲಿಗೆ; ಎಐಟಿಯುಸಿಯಿಂದ ಪ್ರತಿಭಟನೆ.!

0
169

ವಿಜಯನಗರ:ಆಗಸ್ಟ್:17:ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಕೂಡ್ಲಿಗಿ ತಾಲೂಕಿನ ನೂರಾರು ಜನ ದೇವದಾಸಿ ಮಹಿಳೆಯರ ಕುಟುಂಬಗಳು ಕೋವಿಡ್ 19ರ ಸಂದರ್ಭದಲ್ಲಿ ತಮ್ಮ ಬದುಕು ಸಾಗಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾವುದೇ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟ ಎಐಟಿಯುಸಿ ಅವರಿಂದ ಪ್ರತಿಭಟನೆ ನಡೆಸಿದರು.

ಭ್ರಷ್ಟ ಅಧಿಕಾರಿಗಳಿಂದ ಮಧ್ಯವರ್ತಿಗಳಿಂದ ದೇವದಾಸಿ ಮಹಿಳೆಯರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ನಿಗದಿತ ಸಮಯದಲ್ಲಿ ಮಾಶಾಸನ ತಿಂಗಳಾದರೂ ಮಾಶಾಸನ ನೀಡುತ್ತಿಲ್ಲ ಸಹಾಯಧನ ನಿವೇಶನಗಳು ಮಕ್ಕಳ ಮದುವೆಯ ಪ್ರೋತ್ಸಾಹಧನ ಅಧಿಕಾರಿಗಳು, ದಲ್ಲಾಳಿಗಳು, ಮಧ್ಯವರ್ತಿಗಳು ಒಂದಾಗಿ ದೇವದಾಸಿ ಮಹಿಳಾ ಫಲಾನುಭವಿಗಳಿಂದ ಸಾವಿರಗಟ್ಟಲೆ ಹಣ ಸುಲಿಗೆ ಮಾಡುತ್ತಿದ್ದಾರೆ. ಹಣ ನೀಡದಿದ್ದರೆ ಸೌಲಭ್ಯಗಳು ದೊರೆಯುತ್ತಿಲ್ಲ ಶಿಕ್ಷಣವಿಲ್ಲದ ಕಾನೂನಿನ ಅರಿವಿಲ್ಲದ ಶೋಷಣೆಗೆ ಒಳಗಾದ ಬಡತನದಲ್ಲಿ ಬಳಲುತ್ತಿರುವ ದೇವದಾಸಿ ಮಹಿಳೆಯರ ಸೌಲಭ್ಯಗಳು ನೀಡುವ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ.

ಎಐಟಿಯುಸಿಯ ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಅಧ್ಯಕ್ಷರಾದ ಕೆ.ರೇಣುಕಮ್ಮ ಗಜಾಪುರ ಮಾತನಾಡಿದರು ಇದೇ ಸಂದರ್ಭದಲ್ಲಿ ತಹಸೀಲ್ದಾರರಾದ ಟಿ ಜಗದೀಶ್ ಅವರಿಗೆ ತಮ್ಮ ಬೇಡಿಕೆಗಳ ಮನವಿಪತ್ರವನ್ನು ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಎಂ ಬಸಣ್ಣ ಇಒ ಅವರು ಮಾತನಾಡಿ ದೇವದಾಸಿ ಮಹಿಳೆಯರಿಗೆ ಮನೆ ಇಲ್ಲದವರಿಗೆ ಮನೆ ನೀಡಲು ಪಟ್ಟಿ ಮಾಡುತ್ತಿದ್ದು ತಾವುಗಳು ಗ್ರಾಮ ಪಂಚಾಯತಿಗೆ ದಾಖಲೆಗಳ ಮೂಲಕ ಅರ್ಜಿ ನೀಡಿ ಎಂದು ತಿಳಿಸಿದರು. ಬೇಡಿಕೆಗಳ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಜಗದೀಶ್ ಅವರು ಈ ಕೂಡಲೇ ತಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ಎಚ್ ವೀರಣ್ಣ, ಹಿರೇಕಲ್ ಹೆಗ್ಡಾಳ್ ಗಂಗಮ್ಮ, ನೀಲಮ್ಮ, ಸೋಮಕ್ಕ, ಚೌಡಾಪುರ ಮಂಜಮ್ಮ, ಮಾರಕ್ಕ ಕಾನಮಡುಗು, ಮಾರಕ್ಕ ಹುಲಿಕೆರೆ, ಗಂಗಣ್ಣ ಹೊಸಹಳ್ಳಿ, ಸೇರಿದಂತೆ ಸಂಘಟನೆ ಗಾರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here