ಜಿಲ್ಲಾ ಪರಿಸರ ಯೋಜನೆ ತಯಾರಿಸಲು ಎಲ್ಲಾ ಇಲಾಖೆಯವರು ಸಹಕರಿಸಿ : ಜಿಲ್ಲಾಧಿಕಾರಿ

0
105

ದಾವಣಗೆರೆ,ಆ.18 : ರಾಜ್ಯ ಪರಿಸರ ಯೋಜನೆ ತಯಾರಿಸುವ ಸಲುವಾಗಿ ಜಿಲ್ಲಾ ಪರಿಸರ ಯೋಜನೆ ಸಿದ್ಧಪಡಿಸುವುದು ಅವಶ್ಯಕವಾಗಿದ್ದು, ಸಂಬAಧಪಟ್ಟ ಎಲ್ಲಾ ಇಲಾಖೆಗಳು ಆ.24 ರೊಳಗಾಗಿ ಜಿಲ್ಲೆಗೆ ಸಂಬAಧಿಸಿದ ಸಂಪೂರ್ಣ ಮಾಹಿತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪರಿಸರ ಯೋಜನೆ-2021 ತಯಾರಿಸುವ ಕುರಿತು ಆಯೋಜಿಸಿದ್ದ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆ.24 ರೊಳಗಾಗಿ ಜಿಲ್ಲೆಗೆ ಸಂಬAಧಿಸಿದ ಮಾಹಿತಿ ಕ್ರೂಢೀಕರಿಸಿ ಆ.25 ಕ್ಕೆ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ವರದಿ ತಯಾರಿಸಿ, ಆ.26 ರೊಳಗಾಗಿ ಪೂರ್ಣಗೊಳಿಸಬೇಕು. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಪರಿಸರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಆ.27 ರಂದು ಸಿದ್ಧಪಡಿಸಿರುವ ಪೂರ್ಣ ಪ್ರಮಾಣದ ಜಿಲ್ಲಾ ಪರಿಸರ ಯೋಜನೆಯನ್ನು ವೆಬ್‌ಸೈಟ್ ಗೆ ಅಪ್‌ಲೋಡ್ ಮಾಡಬೇಕು ಎಂದು ಆದೇಶಿಸಿದ ಅವರು, ವೆಬ್‌ಸೈಟ್ ಗೆ ನಿಖರವಾದ ಒಂದು ಹೆಸರನ್ನು ನೀಡಿದರೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕಿ ನಜ್ಮಾ, ಪರಿಸರ ಇಲಾಖೆ, ನೀರಾವರಿ ಇಲಾಖೆ, ಸಂಖ್ಯಾಶಾಸ್ತಿçÃಯ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬAಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here